ಮೈಸೂರು | ನವದೆಹಲಿ: 2026ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತದ ಕೀರ್ತಿ ಹೆಚ್ಚಿಸಿದ ಮೈಸೂರಿನ ಪ್ಯಾರಾ ಅಥ್ಲೀಟ್ ಶಿಲ್ಪಾ ಕೆ. ಶೈಲಾ ಅವರನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ನವದೆಹಲಿಯ ತಮ್ಮ ನಿವಾಸದಲ್ಲಿ ಸನ್ಮಾನಿಸಿ ಅಭಿನಂದಿಸಿದರು. 🇮🇳🏅
ಮಹಿಳೆಯರ ಶಾಟ್ಪುಟ್ F-57 ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಗಮನ ಸೆಳೆದಿರುವ ಶಿಲ್ಪಾ ಅವರ ಸಾಧನೆಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಶಿಲ್ಪಾ ಅವರೊಂದಿಗೆ ಆಗಮಿಸಿದ್ದ ಅವರ ತರಬೇತುದಾರರಾದ ಸತ್ಯನಾರಾಯಣ ಹಾಗೂ ಪುಷ್ಪಾ ನಿರಂಜನ್ ಪ್ರಸಾದ್ ಅವರನ್ನೂ ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. 👏
ಶಿಲ್ಪಾ ಅವರ ಕ್ರೀಡಾ ಪಯಣ, ಇದುವರೆಗೆ ಸಾಧಿಸಿರುವ ಯಶಸ್ಸು, ತರಬೇತಿ ಹಾಗೂ ಕುಟುಂಬದ ಹಿನ್ನೆಲೆಯ ಕುರಿತು ಸಚಿವರು ಮಾಹಿತಿ ಪಡೆದುಕೊಂಡರು.
“ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿರುವ ನಿಮ್ಮ ಸಾಧನೆ ಪ್ರೇರಣಾದಾಯಕ. ಯುವ ಸಮುದಾಯಕ್ಕೆ ನೀವು ಮಾದರಿಯಾಗಿದ್ದೀರಿ” ಎಂದು ಸಚಿವರು ಶಿಲ್ಪಾ ಅವರನ್ನು ಅಭಿನಂದಿಸಿದರು.
ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಶಿಲ್ಪಾ ಅವರು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವ ಮೂಲಕ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. ಅವರ ಸಾಧನೆ ಪ್ಯಾರಾ ಕ್ರೀಡಾಪಟುಗಳಿಗೆ ಮಾತ್ರವಲ್ಲದೆ, ಕ್ರೀಡಾ ಕ್ಷೇತ್ರದಲ್ಲಿ ಕನಸು ಕಾಣುತ್ತಿರುವ ಪ್ರತಿಯೊಬ್ಬ ಯುವಕ-ಯುವತಿಗೂ ಸ್ಫೂರ್ತಿಯಾಗಿದೆ. 🏆✨
ಶಿಲ್ಪಾ ಅವರ ಈ ಸಾಧನೆಗೆ ಕ್ರೀಡಾಭಿಮಾನಿಗಳು ಹಾಗೂ ಮೈಸೂರು-ಕರ್ನಾಟಕದ ಜನರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. 🇮🇳❤️
ಕರ್ನಾಟಕದ ಹೆಮ್ಮೆ | ಮೈಸೂರಿನ ಸಾಧಕಿ | ಭಾರತದ ಪದಕದ ಮಗಳು 🥉🇮🇳
📲 ಇಂತಹ ರಾಜ್ಯದ ಹೆಮ್ಮೆಯ ಸುದ್ದಿಗಳಿಗಾಗಿ ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ:
🌐 www.karunaadutimes.com
👉 ಕರ್ನಾಟಕದ ಪ್ರತಿಯೊಂದು ಪ್ರಮುಖ ಸುದ್ದಿಯನ್ನೂ ಕ್ಷಣಕ್ಷಣಕ್ಕೂ ತಿಳಿಯಲು Karunaadu Times ಅನ್ನು Follow ಮಾಡಿ.
Tags:#CommonwealthGames2026 #CWG2026 #ShilpaKShyla #ParaAthlete #ParaAthletics #ShotPut #F57 #Mysuru #KRNagar #Karnataka #KarnatakaSports #IndianSports #SportsNews #HDKumaraswamy #Kumaraswamy #KannadaNews #MysuruNews #KarunaaduTimes #ಕರ್ನಾಟಕ #ಮೈಸೂರು #ಕ್ರೀಡಾಸುದ್ದಿ #ಪ್ಯಾರಾಅಥ್ಲೀಟ್