ಆನೇಕಲ್: ಮದ್ಯದ ಅಮಲಿನಲ್ಲಿ ನಿಯಂತ್ರಣ ಕಳೆದುಕೊಂಡ ಐಟಿ ಉದ್ಯೋಗಿಯೊಬ್ಬ ಸುಮಾರು 45 ನಿಮಿಷಗಳ ಕಾಲ ಏರ್ಗನ್ನಿಂದ ಮನಬಂದಂತೆ ಗುಂಡು ಹಾರಿಸಿದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬಂಡಾಪುರ ಸಮೀಪದ ಸಿಪಾನಿ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. ಘಟನೆಯಿಂದ ಅಪಾರ್ಟ್ಮೆಂಟ್ ನಿವಾಸಿಗಳು ಭಯಭೀತರಾಗಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಪೊಲೀಸರ ಮಾಹಿತಿ ಪ್ರಕಾರ, ಉತ್ತರ ಪ್ರದೇಶದ ಲಕ್ನೋ ಮೂಲದ ಅನುರಾಗ್ ತಿವಾರಿ (40) ವೈಟ್ಫೀಲ್ಡ್ನ ಖಾಸಗಿ ಸಂಸ್ಥೆಯಲ್ಲಿ ಐಟಿ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕಳೆದ ಎಂಟು ತಿಂಗಳಿನಿಂದ ಅಪಾರ್ಟ್ಮೆಂಟ್ನಲ್ಲಿ ಬಾಡಿಗೆಗೆ ವಾಸವಾಗಿದ್ದನು.
ಘಟನೆಯ ರಾತ್ರಿ ಮದ್ಯಪಾನ ಮಾಡಿ ಫ್ಲಾಟ್ನಲ್ಲಿ ಜೋರಾಗಿ ಕೂಗಾಡುತ್ತಿದ್ದ ಆರೋಪಿ, ಬಳಿಕ ಬಾಲ್ಕನಿಗೆ ಬಂದು ಏರ್ಗನ್ನಿಂದ ನಿರಂತರವಾಗಿ ಫೈರಿಂಗ್ ನಡೆಸಿದ್ದಾನೆ. ಸುಮಾರು 45 ನಿಮಿಷಗಳ ಕಾಲ ನಡೆದ ಈ ಕೃತ್ಯದಲ್ಲಿ ಅಪಾರ್ಟ್ಮೆಂಟ್ ಆವರಣದಲ್ಲಿದ್ದ ಕಾರುಗಳು ಹಾಗೂ ಪಾರ್ಕಿಂಗ್ ಶೆಡ್ನ ಶೀಟ್ಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಗುಂಡಿನ ಶಬ್ದ ಕೇಳಿ ಪರಿಸ್ಥಿತಿಯನ್ನು ಪರಿಶೀಲಿಸಲು ಬಂದ ಸೆಕ್ಯುರಿಟಿ ಸಿಬ್ಬಂದಿಯ ಮೇಲೂ ಆತ ಏರ್ಗನ್ ತೋರಿಸಿ ಫೈರ್ ಮಾಡಿದ್ದಾನೆ ಎನ್ನಲಾಗಿದೆ. ಇದರಿಂದ ಆತಂಕಗೊಂಡ ನಿವಾಸಿಗಳು ತಕ್ಷಣವೇ ಸೂರ್ಯನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಬಳಿಯಿದ್ದ ಏರ್ಗನ್ ಹಾಗೂ ಬಳಸಿದ್ದ ಬಾಲ್ಸ್ಗಳನ್ನು ವಶಪಡಿಸಿಕೊಂಡಿದ್ದು, ಈ ಸಂಬಂಧ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಸಂಪೂರ್ಣ ಹಿನ್ನೆಲೆ ಕುರಿತು ತನಿಖೆ ಮುಂದುವರಿದಿದೆ.
🚨 ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ತರುವ ಇಂತಹ ಘಟನೆಗಳು ಆತಂಕಕ್ಕೆ ಕಾರಣವಾಗಿದ್ದು, ಅಪಾರ್ಟ್ಮೆಂಟ್ಗಳಲ್ಲಿ ಭದ್ರತಾ ಕ್ರಮಗಳನ್ನು ಮತ್ತಷ್ಟು ಬಲಪಡಿಸುವ ಅಗತ್ಯತೆ ಮತ್ತೊಮ್ಮೆ ಬೆಳಕಿಗೆ ಬಂದಿದೆ.
🌐 ಕ್ಷಣಕ್ಷಣದ ನಿಖರ ಸುದ್ದಿಗಳಿಗಾಗಿ ಭೇಟಿ ನೀಡಿ: www.karunaadutimes.com
📲 Karunaadu Times ಜೊತೆಗೆ ಸದಾ ಸಂಪರ್ಕದಲ್ಲಿರಿ – ವಿಶ್ವಾಸಾರ್ಹ ಸುದ್ದಿಗಳ ನಿಮ್ಮ ನೆಚ್ಚಿನ ತಾಣ.
Tags:#Anekal #Bandapura #SipaniApartment #Techie #AirGun #Firing #CrimeNews #Bengaluru #Whitefield #SuryanagarPolice #KarnatakaNews #BreakingNews #KarunaaduTimes #ಆನೇಕಲ್ #ಏರ್ಗನ್ #ಟೆಕ್ಕಿ #ಗುಂಡಿನದಾಳಿ #ಮದ್ಯದಅಮಲು #ಅಪಾರ್ಟ್ಮೆಂಟ್ #ಅಪರಾಧಸುದ್ದಿ #ಕರ್ನಾಟಕಸುದ್ದಿ #ಬ್ರೇಕಿಂಗ್ನ್ಯೂಸ್ #KarunaaduTimes