ಆಯುರ್ವೇದ: ವೈದ್ಯರಾದ ಹಾಲಮ್ಮ ಅವರು ತಮ್ಮ ಮಕ್ಕಳಾದ ಕುಮಾರ ಅಮನ್ ಹಾಗೂ ಕುಮಾರಿ ಅನಘ ಅವರೊಂದಿಗೆ ನಮ್ಮ ಮ್ಯಾನೋರ್ ಫಾರ್ಮ್ಗೆ ಆಗಮಿಸಿದ್ದರು.
ತೋಟದಲ್ಲಿ ಸುತ್ತಾಡುತ್ತಾ ನಮ್ಮಲ್ಲಿ ಬೆಳೆದು ನಿಂತಿರುವ ವಿವಿಧ ಬಳ್ಳಿ, ಗಿಡ-ಮರಗಳು ಹಾಗೂ ಅವುಗಳ ಆಯುರ್ವೇದ ಔಷಧೀಯ ಗುಣಗಳ ಕುರಿತು ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡೆವು. ಕೆಲವೊಮ್ಮೆ ಹಾಲಮ್ಮ ಅವರು ನೀಡುತ್ತಿದ್ದ ಅಮೂಲ್ಯ ಮಾಹಿತಿಯನ್ನು ಕೇಳುವಾಗ, ನನಗೂ ಚಂದ್ರರೇಖಾ ಅವರಿಗೂ ನಾವು ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳೇ ಎಂಬ ಭಾವನೆ ಮೂಡುವಷ್ಟರ ಮಟ್ಟಿಗೆ ಅವರ ಜ್ಞಾನ ಹಾಗೂ ಅನುಭವ ನಮ್ಮನ್ನು ಆಕರ್ಷಿಸಿತು.
ಗಿಡಮೂಲಿಕೆಗಳ ಬಗ್ಗೆ ಅಪಾರ ಜ್ಞಾನ ಹೊಂದಿರುವ ಹಾಲಮ್ಮ ಅವರು, ತಮಗೂ ಮುಂದೆ ಸ್ವಂತವಾಗಿ ಒಂದು ಔಷಧೀಯ ಸಸ್ಯಗಳ ತೋಟವನ್ನು ಬೆಳೆಸಬೇಕೆಂಬ ಮಹದಾಸೆ ಇದೆ ಎಂದು ತಮ್ಮ ಮನದಾಳದ ಇಂಗಿತವನ್ನು ಹಂಚಿಕೊಂಡರು.
ಅವರು ನಮ್ಮ ಮ್ಯಾನೋರ್ ಫಾರ್ಮ್ಗೆ ಬರುವಾಗ ತಮ್ಮ ಆಸ್ಪತ್ರೆಯ ಆವರಣದಲ್ಲಿ ಬೆಳೆಸಿದ್ದ ಮಂಗರವಳ್ಳಿ (ಅಸ್ತಿ ಶೃಂಕಲ) — Bone Setter ಸಸ್ಯವನ್ನು ಪ್ರೀತಿಯಿಂದ ತಂದಿದ್ದರು. ಗೋಧೂಳಿ ಸಮಯದಲ್ಲಿ ನಾವೆಲ್ಲರೂ ಸೇರಿ ಆ ಔಷಧೀಯ ಸಸ್ಯವನ್ನು ನಮ್ಮ ತೋಟದಲ್ಲಿ ನಾಟಿ ಮಾಡಿದೆವು.
ಪ್ರೀತಿಯಿಂದ ಮಂಗರವಳ್ಳಿಯನ್ನು ನಮ್ಮೊಂದಿಗೆ ಹಂಚಿಕೊಂಡ ಹಾಲಮ್ಮ ಅವರಿಗೆ ನಮ್ಮ ಇಡೀ ಪರಿವಾರ ಹೃತ್ಪೂರ್ವಕವಾಗಿ ಕೃತಜ್ಞವಾಗಿದೆ. 🙏
ನಮ್ಮ ತೋಟದಲ್ಲಿ ಈಗಾಗಲೇ ಬೆಳೆದು ನಿಂತಿರುವ ಅನೇಕ ಔಷಧೀಯ ಸಸ್ಯಗಳ ಸಾಲಿಗೆ ಮತ್ತೊಂದು ಅಮೂಲ್ಯ ಸಸ್ಯ ಸೇರ್ಪಡೆಯಾಗಿದೆ. ಹೀಗೆ ನಮ್ಮ ತೋಟದಲ್ಲಿ ಔಷಧೀಯ ಸಸ್ಯಗಳ ವೈವಿಧ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗುತ್ತಿದೆ.
ಧನ್ಯೋಸ್ಮಿ. 🙏
ವಸಂತ್ ಮಾಲವಿ
ಹಗರಿಬೊಮ್ಮನಹಳ್ಳಿ
📞 9448261916
📞 6361537033
Tags:#ಆಯುರ್ವೇದ #ಔಷಧೀಯಸಸ್ಯಗಳು #ಮಂಗರವಳ್ಳಿ #ಅಸ್ತಿಶೃಂಕಲ #BoneSetter #ಗಿಡಮೂಲಿಕೆಗಳು #ಮ್ಯಾನೋರ್ಫಾರ್ಮ್ #ಹಗರಿಬೊಮ್ಮನಹಳ್ಳಿ #Ayurveda #MedicinalPlants #HerbalGarden #NatureLovers #KarunaaduTimes