ಗದಗ: ಗದಗ ರೈಲು ನಿಲ್ದಾಣದಲ್ಲಿ ನಡೆದ ನಿಯಮಿತ ತಪಾಸಣೆ ವೇಳೆ ರೈಲ್ವೆ ಪೊಲೀಸರು ಸುಮಾರು ₹9.56 ಲಕ್ಷ ಮೌಲ್ಯದ 19.300 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆಯಿಂದ ಮಾದಕ ವಸ್ತು ಸಾಗಾಟದ ಜಾಲದ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದು, ಪ್ರಕರಣದ ತನಿಖೆ ತೀವ್ರಗೊಳಿಸಲಾಗಿದೆ.
ಮಾಹಿತಿಯ ಪ್ರಕಾರ, ಶಾಲಿಮಾರ್–ವಾಸ್ಕೋ ಎಕ್ಸ್ಪ್ರೆಸ್ ರೈಲು ಇಂದು ಬೆಳಿಗ್ಗೆ ಸುಮಾರು 8:06 ಗಂಟೆಗೆ ಗದಗ ರೈಲು ನಿಲ್ದಾಣ ತಲುಪಿದ ವೇಳೆ, ಇಂಜಿನ್ ಹಿಂಭಾಗದ ಜನರಲ್ ಕೋಚ್ನ ಶೌಚಾಲಯದ ಸಮೀಪ ಅನುಮಾನಾಸ್ಪದವಾಗಿ ಇರಿಸಲಾಗಿದ್ದ ಎರಡು ಬಿಳಿ ಬಣ್ಣದ ಚೀಲಗಳು ರೈಲ್ವೆ ಪೊಲೀಸರ ಗಮನಕ್ಕೆ ಬಂದಿವೆ.
ತಪಾಸಣೆ ವೇಳೆ ಚೀಲಗಳು ಯಾರದ್ದು ಎಂದು ಪ್ರಯಾಣಿಕರನ್ನು ವಿಚಾರಿಸಿದರೂ ಯಾರೂ ತಮ್ಮದೆಂದು ಹೇಳದ ಹಿನ್ನೆಲೆಯಲ್ಲಿ ಪೊಲೀಸರು ಚೀಲಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದರು. ಪರಿಶೀಲನೆಯ ವೇಳೆ ಚೀಲಗಳೊಳಗೆ ದೊಡ್ಡ ಪ್ರಮಾಣದ ಗಾಂಜಾ ಪತ್ತೆಯಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಒಂದು ಚೀಲದಲ್ಲಿ 11.700 ಕೆಜಿ ಗಾಂಜಾ (ಅಂದಾಜು ಮೌಲ್ಯ ₹5.64 ಲಕ್ಷ) ಹಾಗೂ ಮತ್ತೊಂದು ಚೀಲದಲ್ಲಿ 7.600 ಕೆಜಿ ಗಾಂಜಾ (ಅಂದಾಜು ಮೌಲ್ಯ ₹3.92 ಲಕ್ಷ) ಪತ್ತೆಯಾಗಿದ್ದು, ಒಟ್ಟು 19.300 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಈ ಮಾದಕ ವಸ್ತು ಎಲ್ಲಿಂದ ತರಲಾಗುತ್ತಿತ್ತು ಹಾಗೂ ಯಾರಿಗೆ ತಲುಪಬೇಕಾಗಿತ್ತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಗದಗ ರೈಲ್ವೆ ಪೊಲೀಸ್ ಠಾಣೆ ಅಧಿಕಾರಿಗಳು ಸಾಗಾಟದ ಹಿಂದಿರುವ ಜಾಲವನ್ನು ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ.
ರೈಲ್ವೆ ಮಾರ್ಗಗಳ ಮೂಲಕ ನಡೆಯುವ ಅಕ್ರಮ ಮಾದಕ ವಸ್ತು ಸಾಗಾಟ ತಡೆಗೆ ರೈಲ್ವೆ ಪೊಲೀಸರು ಕಟ್ಟುನಿಟ್ಟಿನ ನಿಗಾ ಮುಂದುವರಿಸಿದ್ದು, ಈ ಕಾರ್ಯಾಚರಣೆ ಮಹತ್ವದ ಯಶಸ್ಸಿಯಾಗಿ ಪರಿಗಣಿಸಲಾಗಿದೆ.
Tags: #Gadag #GadagRailway #RailwayPolice #GanjaSeized #DrugBust #Narcotics #CrimeNews #ShalimarVascoExpress #RailwayNews #KarnatakaPolice #GadagNews #BreakingNews #KannadaNews #KarunaaduTimes #KarnatakaNews #LatestNews #TrendingNews #ViralNews #wwwKarunaaduTimesCom #ಗದಗ #ರೈಲ್ವೆಪೊಲೀಸ್ #ಗಾಂಜಾ #ಮಾದಕವಸ್ತು #ಅಪರಾಧಸುದ್ದಿ #ಕರ್ನಾಟಕಸುದ್ದಿ
🌐 Visit: www.karunaadutimes.com�
📲 Fast • Trusted • Kannada News 24×7
⭐ Follow Karunaadu Times for Every Big Update