ಹಾಸನ, ಜು.30: ಹಾಸನ ನಗರದ ವಲ್ಲಭಭಾಯಿ ರಸ್ತೆಯಲ್ಲಿ ಎಂಟು ತಿಂಗಳ ಹೆಣ್ಣು ಕಂದಮ್ಮ ಬಕೆಟ್ನಲ್ಲಿ ಬಿದ್ದು ಮೃತಪಟ್ಟಿರುವ ದುರ್ಘಟನೆ ಸಂಭವಿಸಿದ್ದು, ಕುಟುಂಬವನ್ನು ಆಘಾತಕ್ಕೀಡು ಮಾಡಿದೆ.
ಮೃತ ಕಂದಮ್ಮನನ್ನು ಪುಷ್ಪಾಲೋಚನ ಎಂದು ಗುರುತಿಸಲಾಗಿದೆ. ಆಕೆ ಗಿರೀಶ್ ಹಾಗೂ ಚೈತ್ರಾ ದಂಪತಿಯ ಮೂರನೇ ಪುತ್ರಿಯಾಗಿದ್ದಳು. ಗಿರೀಶ್ ಅವರು ಚಿನ್ನ-ಬೆಳ್ಳಿ ಕೆಲಸ ಮಾಡುತ್ತಿದ್ದು, ದಂಪತಿಗೆ ಮೂವರು ಹೆಣ್ಣುಮಕ್ಕಳಿದ್ದಾರೆ.
ಲಭ್ಯ ಮಾಹಿತಿಯ ಪ್ರಕಾರ, ತಾಯಿ ಚೈತ್ರಾ ಅವರು ಬಟ್ಟೆಗಳನ್ನು ನೀರಿನಲ್ಲಿ ನೆನೆಸಿಡಲು ಬಕೆಟ್ ತುಂಬಿಸಿ ಬಳಿಕ ಸ್ನಾನಕ್ಕೆ ತೆರಳಿದ್ದರು. ಇದೇ ವೇಳೆ ತೆವಳುತ್ತಾ ಬಂದಿದ್ದ ಕಂದಮ್ಮ ಆಕಸ್ಮಿಕವಾಗಿ ನೀರಿದ್ದ ಬಕೆಟ್ಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಕೆಲವೇ ಕ್ಷಣಗಳಲ್ಲಿ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದು, ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದೆ ಎನ್ನಲಾಗಿದೆ.
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಸಾವಿನ ನಿಖರ ಕಾರಣ ತಿಳಿಯಲು ತನಿಖೆ ಆರಂಭಿಸಿದ್ದಾರೆ. ಈ ಸಂಬಂಧ ಹಾಸನದ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಈ ದುರ್ಘಟನೆ ಪೋಷಕರಿಗೆ ಚಿಕ್ಕ ಮಕ್ಕಳ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಎಚ್ಚರಿಕೆಯ ಸಂದೇಶ ನೀಡಿದೆ. ಮನೆಗಳಲ್ಲಿ ನೀರಿನಿಂದ ತುಂಬಿದ ಬಕೆಟ್, ಟಬ್ ಅಥವಾ ಇತರೆ ಪಾತ್ರೆಗಳನ್ನು ಮಕ್ಕಳ ಕೈಗೆಟುಕದಂತೆ ಇಡುವುದು ಹಾಗೂ ಮಕ್ಕಳ ಮೇಲೆ ನಿರಂತರ ನಿಗಾ ವಹಿಸುವುದು ಅತ್ಯಂತ ಅಗತ್ಯವಾಗಿದೆ.
Tags: #Hassan #BucketAccident #ChildSafety #InfantDeath #KarnatakaNews #HassanNews #BreakingNews #KarunaaduTimes #KannadaNews #TrendingNews #SafetyAwareness #ParentsAlert #ViralNews #wwwಕರುನಾಡುತಿಮೆಸ್ಕಾಂ
🌐 Visit: www.karunaadutimes.com�
📲 Fast • Trusted • Kannada News 24×7
⭐ Follow Karunaadu Times for Every Big Update