ರಾಮನಗರ/ಮೈಸೂರು, ಜು. 23 (ಕರುನಾಡು ಟೈಮ್ಸ್):
ಸಮಾಜ ಸೇವೆ, ಜನಪರ ಹೋರಾಟ ಹಾಗೂ ಪತ್ರಿಕೆ ಮತ್ತು ಡಿಜಿಟಲ್ ಮೀಡಿಯಾ ಕ್ಷೇತ್ರದಲ್ಲಿ ಸಲ್ಲಿಸಿರುವ ಗಮನಾರ್ಹ ಸೇವೆಯನ್ನು ಪರಿಗಣಿಸಿ, ಕರುನಾಡು ಟೈಮ್ಸ್ ಸಂಸ್ಥಾಪಕ, ಹಿರಿಯ ಪತ್ರಕರ್ತ ಹಾಗೂ ಬರಹಗಾರ ಗೋ ರಾ ಶ್ರೀನಿವಾಸ (ಶ್ರೀನಿವಾಸ ಜಿ.ಆರ್.) ಅವರಿಗೆ 2026ನೇ ಸಾಲಿನ ಪ್ರತಿಷ್ಠಿತ ‘ವಿಕಾಸ ಶ್ರೀ’ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ (ರಿ), ಮೈಸೂರು ಘೋಷಿಸಿದೆ.
ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಗೋವಿಂದೇಗೌಡನದೊಡ್ಡಿ ಗ್ರಾಮದ ಮೂಲದವರಾದ ಗೋ ರಾ ಶ್ರೀನಿವಾಸ ಅವರು ಕಳೆದ ಎರಡು ದಶಕಗಳಿಂದ ಸಮಾಜಮುಖಿ ಹೋರಾಟಗಳು, ಜನಪರ ಸೇವಾ ಚಟುವಟಿಕೆಗಳು ಹಾಗೂ ಸುಮಾರು ಒಂದೂವರೆ ದಶಕದಿಂದ ಪತ್ರಿಕೆ ಮತ್ತು ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಮಾಜಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭವು ಇದೇ ತಿಂಗಳ ಜುಲೈ 24ರಂದು (ಶುಕ್ರವಾರ) ಸಂಜೆ 4.00 ಗಂಟೆಗೆ ಮೈಸೂರಿನ ನಂಜಬಹದ್ದೂರ್ ಛತ್ರದ ಸಭಾಂಗಣದಲ್ಲಿ ನಡೆಯಲಿದೆ. ಒಕ್ಕಲಿಗರ ಸಂಘದ ಸಂಸ್ಥಾಪಕರಲ್ಲೊಬ್ಬರಾದ ದಿವಂಗತ ಕೆ.ಎಚ್. ರಾಮಯ್ಯ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯ ಅಧ್ಯಕ್ಷೆ ಹೆಚ್.ಎಲ್. ಯಮುನಾ ತಿಳಿಸಿದ್ದಾರೆ.
ಪ್ರಶಸ್ತಿ ಘೋಷಣೆಗೆ ಪ್ರತಿಕ್ರಿಯಿಸಿರುವ ಗೋ ರಾ ಶ್ರೀನಿವಾಸ ಅವರು, ಸಮಾಜ ಸೇವೆ ಹಾಗೂ ಪತ್ರಿಕೋದ್ಯಮದಲ್ಲಿ ತಾವು ಸಲ್ಲಿಸಿರುವ ಕಾರ್ಯವನ್ನು ಗುರುತಿಸಿ ನೀಡಿರುವ ಈ ಗೌರವವು ತಮ್ಮ ಹೊಣೆಗಾರಿಕೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪರ ಮತ್ತು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲು ಪ್ರೇರಣೆ ನೀಡಿದೆ ಎಂದು ಹೇಳಿದ್ದಾರೆ.
‘ವಿಕಾಸ ಶ್ರೀ’ ಪ್ರಶಸ್ತಿಗೆ ಆಯ್ಕೆ ಮಾಡಿರುವ ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಎಲ್ಲಾ ಸದಸ್ಯರಿಗೆ ಅವರು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ.
Tags: #GoRaSrinivasa #SrinivasaGR #VikasaShri #KarunaaduTimes #KannadaJournalism #DigitalMedia #SocialService #Ramanagara #Channapatna #Mysuru #Vokkaliga #KarnatakaNews #KannadaMedia #Journalist #Award #BreakingNews #KarunaaduTimesNews #Karnataka #PrideOfKarnataka #ಮೀಡಿಯಾಅವಾರ್ಡ್
🌐 Visit: www.karunaadutimes.com�
📲 Fast • Trusted • Kannada News 24×7
⭐ Follow Karunaadu Times for Every Big Update