ಬೆಂಗಳೂರು ದಕ್ಷಿಣ: ಸ್ಥಳೀಯ ಕಲೆ, ಸಂಸ್ಕೃತಿ ಮತ್ತು ಜಾನಪದ ಪರಂಪರೆಯನ್ನು ಉತ್ತೇಜಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ವತಿಯಿಂದ ಸ್ಥಾಪಿತವಾಗಿರುವ **'ಮುದ್ದುಶ್ರೀ ದಿಬ್ಬ'**ದಲ್ಲಿ ನಡೆಯುತ್ತಿರುವ ಮಾಸಿಕ ಸಾಂಸ್ಕೃತಿಕ ಸರಣಿ 'ತಿಂಗಳ ತಳಿರು' ಕಾರ್ಯಕ್ರಮದ ಮೂರನೇ ಸಂಚಿಕೆ ಜುಲೈ 25, 2026 (ಶನಿವಾರ) ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.
ಕೆರೆಮೇಗಳದೊಡ್ಡಿ ಸಮೀಪದ ಮುದ್ದುಶ್ರೀ ದಿಬ್ಬದ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕೆ.ಎಸ್. ಮುದ್ದಪ್ಪ–ಚಿಕ್ಕಮ್ಮ ರಂಗಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಬೆಂಗಳೂರು ದಕ್ಷಿಣ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗ ನೀಡಿದೆ.
ಈ ಬಾರಿ ರಾಮನಗರದ ಎ.ಆರ್.ಕೆ. ನೃತ್ಯ ಮತ್ತು ಸ್ಪೋರ್ಟ್ಸ್ ಅಕಾಡೆಮಿ ಕಲಾವಿದರು 'ನೃತ್ಯಾಂಜಲಿ' ಎಂಬ ವಿಶೇಷ ನೃತ್ಯ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಿದ್ದಾರೆ. ಪೌರಾಣಿಕ ರಂಗಭೂಮಿ ಕಲಾವಿದ ಎ.ಆರ್. ರವಿಕುಮಾರ್, ನೃತ್ಯಗುರುಗಳಾದ ಕೆ. ಜೀವನ್ ಹಾಗೂ ಮಂಜುಳ ರವಿಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಆರಂಭದಲ್ಲಿ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ. ಎಂ. ಬೈರೇಗೌಡ ಪ್ರಾಸ್ತಾವಿಕವಾಗಿ ಮಾತನಾಡಲಿದ್ದು, ಕಲೆ, ಸಾಹಿತ್ಯ ಹಾಗೂ ಜಾನಪದ ಸಂಸ್ಕೃತಿಯ ಅಭಿವೃದ್ದಿಗೆ ಇಂತಹ ಕಾರ್ಯಕ್ರಮಗಳು ಮತ್ತಷ್ಟು ವೇದಿಕೆಯಾಗಲಿವೆ ಎಂದು ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.
ಇದೇ ವೇಳೆ, ಮುದ್ದುಶ್ರೀ ದಿಬ್ಬವು ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಮಾನ್ಯತೆ ಪಡೆದು ಜಾನಪದ ಪ್ರದರ್ಶನ ಕಲೆಗಳಲ್ಲಿ ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್ಗಳನ್ನು ಯಶಸ್ವಿಯಾಗಿ ನಡೆಸುತ್ತಿರುವುದು ಗಮನಾರ್ಹವಾಗಿದೆ.
Tags: #ಮುದ್ದುಶ್ರೀದಿಬ್ಬ, #ತಿಂಗಳತಳಿರು, #ನೃತ್ಯಾಂಜಲಿ, #ಬೆಂಗಳೂರುದಕ್ಷಿಣ, #ರಾಮನಗರ, #ಕನ್ನಡಮತ್ತುಸಂಸ್ಕೃತಿಇಲಾಖೆ, #ಸಾಂಸ್ಕೃತಿಕಕಾರ್ಯಕ್ರಮ, #ಜಾನಪದಕಲೆ, #DanceProgram, #CulturalEvent, #BengaluruSouth, #Ramanagara, #KannadaCulture, #FolkArt, #KSMuddappaTrust, #KarunaaduTimes, #KarnatakaNews, #KannadaNews, #TodayNews, #BreakingNews
🌐 Visit: www.karunaadutimes.com�
📲 Fast • Trusted • Kannada News 24×7
⭐ Follow Karunaadu Times for Every Big Update