ಬೆಂಗಳೂರು: ನಗರೀಕರಣದ ವೇಗದಿಂದ ಹಸಿರು ಹೊದಿಕೆ ಕುಗ್ಗುತ್ತಿರುವ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರನ್ನು ಮತ್ತಷ್ಟು ಹಸಿರಾಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ 'ಬೆಂಗಳೂರು ಹಸಿರೂರು' ಅಭಿಯಾನಕ್ಕೆ ಚಾಲನೆ ನೀಡಿದೆ. ಆಗಸ್ಟ್ 15ರಿಂದ ಸೆಪ್ಟೆಂಬರ್ 15ರವರೆಗೆ ನಡೆಯಲಿರುವ ಈ ವಿಶೇಷ ಅಭಿಯಾನದಡಿ ನಗರದಲ್ಲಿ 64 ಸಾವಿರ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದ್ದು, 40 ಸಾವಿರ ಉಚಿತ ಸಸಿಗಳನ್ನು ನಾಗರಿಕರಿಗೆ ವಿತರಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನೂ ರೂಪಿಸಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಅರಣ್ಯ ವಿಭಾಗದ ಸಭೆಯಲ್ಲಿ ಮಾತನಾಡಿದ ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಸಸಿ ನೆಡುವ ಕಾರ್ಯಕ್ರಮ ಕೇವಲ ದಾಖಲೆಗಳ ಮಟ್ಟದಲ್ಲೇ ಉಳಿಯದೆ, ನೆಟ್ಟ ಸಸಿಗಳನ್ನು ಸಮರ್ಪಕವಾಗಿ ಸಂರಕ್ಷಿಸಿ ಬೆಳೆಸುವತ್ತ ಹೆಚ್ಚಿನ ಗಮನ ಹರಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಅಭಿಯಾನದಲ್ಲಿ ಬೆಂಗಳೂರು ನಿವಾಸಿಗಳು, ಬಡಾವಣೆಗಳ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು (RWAs) ಹಾಗೂ ವಿವಿಧ ಸಂಘ-ಸಂಸ್ಥೆಗಳು ಸಕ್ರಿಯವಾಗಿ ಭಾಗವಹಿಸಬಹುದು. ತಮ್ಮ ಪ್ರದೇಶದಲ್ಲಿ ಕನಿಷ್ಠ 30 ಸಸಿಗಳನ್ನು ನೆಡಲು ಅವಕಾಶವಿದ್ದರೆ, ಆಗಸ್ಟ್ 10ರೊಳಗೆ ಆನ್ಲೈನ್ ಮೂಲಕ ಮನವಿ ಸಲ್ಲಿಸಬಹುದಾಗಿದೆ.
ಮನವಿ ಸಲ್ಲಿಸಿದ ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಲಿದ್ದು, ಸಸಿ ನೆಡುವುದಕ್ಕೆ ಸೂಕ್ತ ಸ್ಥಳವಿದೆ ಎಂದು ದೃಢಪಟ್ಟರೆ ಪಾಲಿಕೆಯ ವತಿಯಿಂದ ಉಚಿತವಾಗಿ ಸಸಿಗಳನ್ನು ಒದಗಿಸಿ ನೆಡುವ ವ್ಯವಸ್ಥೆ ಮಾಡಲಾಗುತ್ತದೆ.
ಸಸಿ ನೆಡುವ ಯೋಜನೆ ವಿಳಂಬವಾಗದಂತೆ ಎಲ್ಲಾ ನಗರ ಪಾಲಿಕೆಗಳಲ್ಲಿ ಟೆಂಡರ್ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸುವಂತೆ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಅರ್ಜಿ ಸಲ್ಲಿಸುವ ವಿಧಾನ
📌 ಕೊನೆಯ ದಿನಾಂಕ: ಆಗಸ್ಟ್ 10
🌱 ವೆಬ್ಸೈಟ್: https://gbatreeplantation.com/�
📧 ಇ-ಮೇಲ್: dcfgba26@gmail.ಕಂ
Tags: #BengaluruHasiruru #Bengaluru #TreePlantation #GreenBengaluru #KrishnaByreGowda #Environment #Karnataka #BBMP #GBA #FreeSaplings #PlantTrees #SaveEnvironment #KannadaNews #BreakingNews #ಕರುನಾಡುತಿಮೇಶ್
🌐 Visit: www.karunaadutimes.com�
📲 Fast • Trusted • Kannada News 24×7
⭐ Follow Karunaadu Times for Every Big Update