ಚಿಕ್ಕಬಳ್ಳಾಪುರ: ಜಿಲ್ಲೆಯ ಮುದ್ದೇನಹಳ್ಳಿ ಸಮೀಪದ ಹೋಂ ಸ್ಟೇನಲ್ಲಿ ಯುವತಿ ಸಾಯಿ ಸುರಭಿ(Sai Surabhi) ನಿಗೂಢವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಸಾಕ್ಷ್ಯವೊಂದು ಲಭ್ಯವಾಗಿದೆ. ಘಟನಾ ಸ್ಥಳದಲ್ಲಿ ಯುವಕ ಸಂಜೀತ್ ಆಲಿ(Sanjith Ali) ಬರೆದಿದ್ದಾನೆ ಎನ್ನಲಾದ ಭಾವನಾತ್ಮಕ ಡೆತ್ ನೋಟ್ (Death Note) ಪತ್ತೆಯಾಗಿದ್ದು, ಇಡೀ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಡೆತ್ ನೋಟ್ನಲ್ಲಿ ಏನಿದೆ?
ಹೋಂ ಸ್ಟೇನ ಚೇರ್ ಮೇಲಿದ್ದ ಡೈರಿಯಲ್ಲಿ ಸಂಜೀತ್ ಆಲಿ ಬರೆದಿದ್ದಾನೆ ಎನ್ನಲಾದ ಸಾಲುಗಳು ಪತ್ತೆಯಾಗಿವೆ. ಅದರಲ್ಲಿ, ಪ್ರಿಯತಮೆ ಹಿಂದೂ. ನಾನು ಮುಸ್ಲಿಂ ಆಗಿ ಹುಟ್ಟಿದ್ದೇ ತಪ್ಪಾ?, ಅನ್ಯಧರ್ಮಿಯರೆಂಬ ಕಾರಣಕ್ಕೆ ನಮ್ಮ ಮದುವೆ ಆಗಲಿಲ್ಲ. ನಾವು ಮದುವೆಯಾಗಲು(Marriage) ಈ ಸಮಾಜ ಬಿಡಲಿಲ್ಲ ಎಂದು ತಮ್ಮ ಪ್ರೀತಿಯ (Love) ವಿಫಲತೆ ಹಾಗೂ ಸಮಾಜದ ವಿರೋಧದ ಬಗ್ಗೆ ಅತ್ಯಂತ ಭಾವುಕವಾಗಿ ಬರೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸದ್ಯ ಈ ಡೆತ್ ನೋಟ್ ಅನ್ನು ವಶಕ್ಕೆ ಪಡೆದಿರುವ ಮುದ್ದೇನಹಳ್ಳಿ ಪೊಲೀಸರು ಇದರ ನಿಖರತೆ ಹಾಗೂ ಹ್ಯಾಂಡ್ರೈಟಿಂಗ್ ಅನ್ನು ಪರಿಶೀಲಿಸುತ್ತಿದ್ದಾರೆ.
Tags: #Chikkaballapur #Muddenahalli #SaiSurabhi #SanjithAli #DeathNote #LoveStory #InterfaithLove #LoveMarriage #MysteryDeath #CrimeNews #KarnatakaNews #BreakingNews #PoliceInvestigation #DeathCase #KannadaNews #KarunaaduTimes #wwwKarunaaduTimes.com