ಚನ್ನಪಟ್ಟಣ: ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಜನ್ಮದಿನದ ಅಂಗವಾಗಿ ಚನ್ನಪಟ್ಟಣ ತಾಲೂಕಿನ ದೇವರಹಳ್ಳಿಯ ಶ್ರೀ ಶಿರಡಿ ಸಾಯಿಬಾಬಾ ವೃದ್ಧಾಶ್ರಮದಲ್ಲಿ ಅಭಿಮಾನಿ ಬಳಗದ ವತಿಯಿಂದ ವೃದ್ಧರಿಗೆ ಹಣ್ಣುಗಳನ್ನು ವಿತರಿಸಿ ಸಮಾಜಮುಖಿ ಸೇವೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಭಿಮಾನಿ ಬಳಗದ ನವಿಲೇಶ್, ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಜನಪರ ಮತ್ತು ಅಭಿವೃದ್ಧಿ ಪರ ನಾಯಕರು ಎಂದು ಬಣ್ಣಿಸಿದರು. ರಾಜ್ಯದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಆಡಳಿತವನ್ನು ನೀಡುವ ಮೂಲಕ ಮತ್ತಷ್ಟು ಜನಸೇವೆ ಮಾಡುವಂತಾಗಲಿ ಎಂದು ಶುಭ ಹಾರೈಸಿದರು.
ಇದಕ್ಕೂ ಮುನ್ನ, ತಾಲೂಕಿನ ಹೊಸೂರುದೊಡ್ಡಿಯ ಶ್ರೀ ದೊಡ್ಡಬೀರೇಶ್ವರಸ್ವಾಮಿ ದೇವಸ್ಥಾನದಲ್ಲಿ ಸಚಿವರ ಆರೋಗ್ಯ, ಆಯುಷ್ಯ ಹಾಗೂ ಯಶಸ್ಸಿಗಾಗಿ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ತಟ್ಟೆಕೆರೆ ಪೈಲ್ವಾನ್ ಅಪ್ಪಾಸ್ವಾಮಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಂದಾರಗುಪ್ಪೆ ಸುರೇಶ್, ಸುಣ್ಣಘಟ್ಟ ಸತೀಶ್, ಹೊಸೂರುದೊಡ್ಡಿ ದೇವರಾಜು, ಶಿವಬೀರಯ್ಯ, ಪೂಜಾರಿದೊಡ್ಡಿ ನಾಗೇಶ್, ಹೊಸೂರುದೊಡ್ಡಿ ಗಣೇಶ್, ಪತ್ರಕರ್ತ ಸಿ.ಎನ್. ವೆಂಕಟೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.
Tags:#YathindraSiddaramaiah #DrYathindraSiddaramaiah #Channapatna #Ramanagara #BirthdayCelebration #OldAgeHome #SocialServic#SpecialPooja #KarnatakaPolitics #KarnatakaNews #KannadaNews #KarunaaduTimes #PublicService #Devarahalli #HosurDoddi #Siddaramaiah #Congress #LocalNews #BirthdayEvent #CommunityService