ಮಂಗಳೂರು: ದಸರಾ(Dasara) ಸಂಭ್ರಮದ ನಡುವೆಯೇ ಕಾಲೇಜು ಆಡಳಿತ ಮಂಡಳಿಯು ಪದವಿ ಸೆಮಿಸ್ಟರ್ ಪರೀಕ್ಷೆಗಳನ್ನು (Semester Exam) ನಿಗದಿಪಡಿಸಿರುವುದನ್ನು ವಿರೋಧಿಸಿ, ನಗರದ ಖ್ಯಾತ ಸೈಂಟ್ ಆಗ್ನೆಸ್ (St. Agnes College) ಕಾಲೇಜಿನ ವಿದ್ಯಾರ್ಥಿಗಳು ಪರೀಕ್ಷೆ ಬಹಿಷ್ಕರಿಸಿ ಕಾಲೇಜು ಗೇಟ್ ಎದುರು ಬೃಹತ್ ಪ್ರತಿಭಟನೆ(Protest) ನಡೆಸಿದ್ದಾರೆ.ಮಂಗಳೂರಿನ(Mangaluru) ಬೆಂದೂರ್ವೆಲ್ ಬಳಿಯಿರುವ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಇಂದಿನಿಂದ ಅಕ್ಟೋಬರ್ 28ರವರೆಗೆ ಪದವಿ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ಪರೀಕ್ಷೆಗಳನ್ನು ಆಯೋಜಿಸಲಾಗಿದೆ.
ಮಂಗಳೂರು ದಸರಾ ಕರಾವಳಿಯ ಪ್ರಮುಖ ಹಬ್ಬವಾಗಿದ್ದು, ಎಲ್ಲೆಡೆ ಸಂಭ್ರಮ ಮನೆಮಾಡಿದೆ. ಆದರೆ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ದಸರಾ ರಜೆಯನ್ನೇ ನೀಡದೆ ಪರೀಕ್ಷೆ ನಡೆಸಲು ಮುಂದಾಗಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.ಮಂಗಳೂರಿನ(Mangaluru) ಬೆಂದೂರ್ವೆಲ್ ಬಳಿಯಿರುವ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಇಂದಿನಿಂದ ಅಕ್ಟೋಬರ್ 28ರವರೆಗೆ ಪದವಿ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ಪರೀಕ್ಷೆಗಳನ್ನು ಆಯೋಜಿಸಲಾಗಿದೆ.
ಮಂಗಳೂರು ದಸರಾ ಕರಾವಳಿಯ ಪ್ರಮುಖ ಹಬ್ಬವಾಗಿದ್ದು, ಎಲ್ಲೆಡೆ ಸಂಭ್ರಮ ಮನೆಮಾಡಿದೆ. ಆದರೆ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ದಸರಾ ರಜೆಯನ್ನೇ ನೀಡದೆ ಪರೀಕ್ಷೆ ನಡೆಸಲು ಮುಂದಾಗಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಲೇಜಿನ ನಡೆಯನ್ನು ಖಂಡಿಸಿ ಕಾಲೇಜಿನ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದಾರೆ. ಈ ಪ್ರತಿಭಟನೆಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಸಾಥ್ ನೀಡಿದೆ.
ಕಾಲೇಜು ಆಡಳಿತ ಮಂಡಳಿಯ ಈ ಕ್ರಮದಿಂದಾಗಿ ದಸರಾ ಆಚರಣೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಆಕ್ಷೇಪಿಸಿರುವ ನೂರಾರು ವಿದ್ಯಾರ್ಥಿಗಳು, ಪರೀಕ್ಷೆಯನ್ನು ಬಹಿಷ್ಕರಿಸಿ ಕಾಲೇಜು ಮುಂಭಾಗ ಧರಣಿ ಕುಳಿತಿದ್ದಾರೆ. ಪರೀಕ್ಷೆಯನ್ನು ಮುಂದೂಡುವಂತೆ ಆಡಳಿತ ಮಂಡಳಿಗೆ ಮೊದಲೇ ಮನವಿ ಸಲ್ಲಿಸಲಾಗಿತ್ತು. ಆದರೂ ವಿದ್ಯಾರ್ಥಿಗಳ ಹಿತಾಸಕ್ತಿ ಕಡೆಗಣಿಸಿ, ಯಾವುದೇ ಸ್ಪಂದನೆ ನೀಡದೆ ಉದ್ದಟತನ ಪ್ರದರ್ಶಿಸಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ದಸರಾ ಹಬ್ಬದ ವೇಳೆ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಯನ್ನು ಸರಿಪಡಿಸಲು ಹಾಗೂ ಪರೀಕ್ಷೆಗಳನ್ನು ತಕ್ಷಣವೇ ಮುಂದೂಡುವಂತೆ ಆಗ್ರಹಿಸಿ ವಿದ್ಯಾರ್ಥಿ ಸಂಘಟನೆಗಳು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೂ ದೂರು ನೀಡಿವೆ. ಸದ್ಯ ಕಾಲೇಜು ಗೇಟ್ ಎದುರು ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿದಿದ್ದು, ಆಡಳಿತ ಮಂಡಳಿಯ ನಿರ್ಧಾರದ ವಿರುದ್ಧ ಘೋಷಣೆಗಳನ್ನು ಕೂಗಲಾಗುತ್ತಿದೆ.
ಈ ಸುದ್ದಿಯನ್ನು ಮತ್ತಷ್ಟು ಉತ್ತಮಗೊಳಿಸಿ ಮತ್ತು ಒಬ್ಬ ಪ್ರಬುದ್ಧ ಪತ್ರಕರ್ತ ಮಾಡಿದ ರೀತಿ ಸ್ಕ್ರಿಪ್ಟ್ ಇರಲಿ ಜೊತೆಗೆ ಯಾವುದೇ ಕಾಪಿ ರೈಟ್ ಬಾರದಂತೆ ನೋಡಿಕೊಳ್ಳಿ ಮತ್ತು ಈ ಸುದ್ದಿಯ ಊರಿಗೆ ಮತ್ತು ವಿಷಯಕ್ಕೆ ತಕ್ಕಂತೆ tags ಅನ್ನು nidi ಮತ್ತು ನಮ್ಮ ವೆಬ್ಸೈಟ್ ಜೊತೆಗೆ ಸುದ್ದಿಗೆ ತಕ್ಕಂತೆ ಭಾವ ಸೂಚಕ ಗಳನ್ನು ಬಳಸಿ ಪ್ರಬುದ್ಧತೆ ಯಿಂದ ಮಾಡಿ ಮತ್ತು ಬೇರೆ ಸುದ್ದಿಮಾಧ್ಯಮ ಮತ್ತು ಪತ್ರಿಕೆgala ಹೆಸರು ಬಾರದಂತೆ ನೋಡಿಕೊಳ್ಳಿ www.karunaadutimes.com idu ವೈರಲ್ ಆಗುವಂತೆ ಮಾಡಿ ಮತ್ತು website visit icon request nidi ವರದಿ: ನವೀನ್ ಕುಮಾರ್ ಸೇರಿಸಿ.
Hashtags:#MangaluruNews #StAgnesCollege #StudentProtest #Dasara #ABVP #CollegeNews #ಮಂಗಳೂರು #ದಸರಾ #ವಿದ್ಯಾರ್ಥಿಗಳಪ್ರತಿಭಟನೆ #ಪದವಿಪರೀಕ್ಷೆ #ಕರುನಾಡುಟೈಮ್ಸ್