ಹುಬ್ಬಳ್ಳಿ: ನೀರು ತೆಗೆಯಲು ತೆರೆದಿಟ್ಟಿದ್ದ ನೀರಿನ ಸಂಪಿಗೆ ಆಯತಪ್ಪಿ ಬಿದ್ದ 6 ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಹುಬ್ಬಳ್ಳಿಯ ಉಣಕಲ್ ಗ್ರಾಮದ ಗಣೇಶ್ ಕಾಲೋನಿಯಲ್ಲಿ ನಡೆದಿದೆ. 😔
ಮೃತ ಬಾಲಕನನ್ನು ಸಿದ್ಧಾರ್ಥ್ ಎಂದು ಗುರುತಿಸಲಾಗಿದೆ. ಸಿದ್ಧಾರ್ಥ್ ಸ್ಥಳೀಯ ಶಾಲೆಯಲ್ಲಿ 1ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಬೆಳಗ್ಗೆ ಸುಮಾರು 9 ಗಂಟೆ ವೇಳೆಗೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಮನೆಯ ಸಮೀಪ ನೀರು ತೆಗೆಯಲು ತೆರೆದಿದ್ದ ಸಂಪಿನಲ್ಲಿ ಬಾಲಕ ಆಕಸ್ಮಿಕವಾಗಿ ಬಿದ್ದಿದ್ದಾನೆ. ಬಾಲಕ ಸಂಪಿಗೆ ಬಿದ್ದಿರುವುದನ್ನು ಗಮನಿಸಿದ ತಂದೆ ನಾಗಪ್ಪ ಅವರು ತಕ್ಷಣವೇ ರಕ್ಷಣೆಗೆ ಮುಂದಾಗಿದ್ದಾರೆ. ಬಳಿಕ ಬಾಲಕನನ್ನು ಕೂಡಲೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಆದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. 💔
ಬಾಲಕನ ಮೃತದೇಹವನ್ನು ಕಿಮ್ಸ್ ಶವಾಗಾರಕ್ಕೆ ರವಾನಿಸಲಾಗಿದ್ದು, ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಪೋಸ್ಟ್ಮಾರ್ಟಂ ವಿಳಂಬಕ್ಕೆ ಕುಟುಂಬಸ್ಥರ ಆಕ್ರೋಶ
ಇದೇ ವೇಳೆ ಮರಣೋತ್ತರ ಪರೀಕ್ಷೆ ವಿಳಂಬವಾಗುತ್ತಿದೆ ಎಂದು ಮೃತ ಬಾಲಕನ ಸಂಬಂಧಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಳಗ್ಗೆಯಿಂದ ಕಾಯುತ್ತಿದ್ದರೂ ಪೋಸ್ಟ್ಮಾರ್ಟಂ ನಡೆಸಿಲ್ಲ ಎಂದು ಆರೋಪಿಸಿರುವ ಅವರು, ವೈದ್ಯರು ಲಭ್ಯವಿಲ್ಲದಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯ ಸಂಪೂರ್ಣ ವಿವರ ಹಾಗೂ ಮರಣೋತ್ತರ ಪರೀಕ್ಷೆಯ ಬಳಿಕ ಬಾಲಕನ ಸಾವಿನ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
⚠️ ಮುನ್ನೆಚ್ಚರಿಕೆ ಅಗತ್ಯ: ತೆರೆದ ನೀರಿನ ಸಂಪು, ಟ್ಯಾಂಕ್ಗಳು ಹಾಗೂ ಇತರ ಅಪಾಯಕಾರಿ ಸ್ಥಳಗಳಿಗೆ ಮಕ್ಕಳ ಪ್ರವೇಶವಾಗದಂತೆ ಸುರಕ್ಷತಾ ಕ್ರಮ ಕೈಗೊಳ್ಳುವುದು ಅತ್ಯಂತ ಅಗತ್ಯ. ಒಂದು ಕ್ಷಣದ ನಿರ್ಲಕ್ಷ್ಯವೂ ಕುಟುಂಬವೊಂದರ ಬದುಕನ್ನೇ ಬದಲಿಸಬಹುದು.
ವರದಿ: ನವೀನ್ ಕುಮಾರ್
🌐 ಇಂತಹ ಸ್ಥಳೀಯ ಹಾಗೂ ರಾಜ್ಯದ ಪ್ರಮುಖ ಸುದ್ದಿಗಳಿಗಾಗಿ ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ:
👉 www.karunaadutimes.com 🔔
Hashtags:#ಹುಬ್ಬಳ್ಳಿ #ಉಣಕಲ್ #ಗಣೇಶ್_ಕಾಲೋನಿ #ಬಾಲಕ_ಸಾವು #ನೀರಿನ_ಸಂಪು #ದುರಂತ #Hubballi #Unkal #HubballiNews #KarnatakaNews #KarunaaduTimes