ವಿಜಯಪುರ: ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬರು 110 ಕೆವಿ ಸಾಮರ್ಥ್ಯದ ವಿದ್ಯುತ್ ಟವರ್ ಏರಿ, ಮೇಲಿನಿಂದ ಕೂಗಾಡಿದ ಘಟನೆ ವಿಜಯಪುರ ನಗರದ ಬೇಗಂ ತಲಾಬ್ ಬಳಿ ನಡೆದಿದೆ. ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ಆತಂಕ ಹಾಗೂ ಕುತೂಹಲದ ವಾತಾವರಣ ನಿರ್ಮಾಣವಾಗಿತ್ತು. 😮⚡
ಕೌಜಲಗಿ ತಾಂಡಾ ನಿವಾಸಿ ರವಿ ರಾಠೋಡ ಎಂಬಾತ ಮದ್ಯ ಸೇವಿಸಿದ ಬಳಿಕ ಏಕಾಏಕಿ ವಿದ್ಯುತ್ ಟವರ್ ಏರಿದ್ದಾನೆ ಎನ್ನಲಾಗಿದೆ. ಶಿವಗಿರಿ 220 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ವಿಜಯಪುರ ನಗರಕ್ಕೆ ವಿದ್ಯುತ್ ಸರಬರಾಜು ಮಾಡುವ 110 ಕೆವಿ ಮಾರ್ಗದ ಟವರ್ ಇದಾಗಿದೆ.
ಟವರ್ನ ಮೇಲ್ಭಾಗಕ್ಕೆ ತೆರಳಿದ ರವಿ, ಕೆಳಗಿದ್ದವರನ್ನು ಉದ್ದೇಶಿಸಿ ಕೂಗಾಡುತ್ತಾ “ನನಗೆ ನ್ಯಾಯ ಬೇಕು” ಎಂದು ಹೇಳುತ್ತಿದ್ದ ಎನ್ನಲಾಗಿದೆ. ⚠️
ವ್ಯಕ್ತಿಯೊಬ್ಬರು ಹೈವೋಲ್ಟೇಜ್ ವಿದ್ಯುತ್ ಮಾರ್ಗದ ಟವರ್ ಏರಿರುವುದನ್ನು ಗಮನಿಸಿದ ಸಾರ್ವಜನಿಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಜಲನಗರ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ.
ಆತನನ್ನು ಸುರಕ್ಷಿತವಾಗಿ ಕೆಳಗಿಳಿಸಲು ಸಿಬ್ಬಂದಿ ಸತತವಾಗಿ ಮನವೊಲಿಸುವ ಪ್ರಯತ್ನ ನಡೆಸಿದ್ದು, ಸುಮಾರು ನಾಲ್ಕು ಗಂಟೆಗಳ ಕಾರ್ಯಾಚರಣೆಯ ಬಳಿಕ ರವಿಯನ್ನು ಟವರ್ನಿಂದ ಕೆಳಗೆ ಕರೆತರಲಾಗಿದೆ. 🙏
ಘಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದರಿಂದ ಕೆಲಕಾಲ ಗೊಂದಲದ ವಾತಾವರಣವೂ ನಿರ್ಮಾಣವಾಗಿತ್ತು. ರಕ್ಷಿಸಿದ ಬಳಿಕ ರವಿಯನ್ನು ಪೊಲೀಸರು ಪ್ರಾಥಮಿಕ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ.
ಈ ಘಟನೆ ಆದರ್ಶನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
⚠️ ಅಪಾಯಕಾರಿ ವಿದ್ಯುತ್ ಟವರ್ ಏರುವಂತಹ ಕೃತ್ಯಗಳು ಜೀವಕ್ಕೆ ಅತ್ಯಂತ ಅಪಾಯಕಾರಿ. ಸಾರ್ವಜನಿಕರು ಇಂತಹ ಸಂದರ್ಭಗಳಲ್ಲಿ ಸ್ವಯಂ ಮಧ್ಯಪ್ರವೇಶ ಮಾಡದೆ ಕೂಡಲೇ ಪೊಲೀಸ್ ಹಾಗೂ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡುವುದು ಸೂಕ್ತ.
🏷️ Tags:#Vijayapura #ವಿಜಯಪುರ #BegumTalab #ವಿದ್ಯುತ್ಟವರ್ #HighVoltage #110KV #VijayapuraNews #ವಿಜಯಪುರಸುದ್ದಿ #BreakingNews #KarnatakaNews #ಕರ್ನಾಟಕಸುದ್ದಿ #PoliceRescue #FireAndRescue #ViralNews #LatestNews #KarunaduTimes
🌐 ಇನ್ನಷ್ಟು ಸ್ಥಳೀಯ ಸುದ್ದಿಗಳಿಗಾಗಿ
👉 www.karunaadutimes.com
📰 ಕರ್ನಾಟಕದ ಸುದ್ದಿಗಳಿಗಾಗಿ ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ
ವರದಿ: ನವೀನ್ ಕುಮಾರ್