ಕೊಪ್ಪಳ | ಬಂಡಿ ಹರ್ಲಾಪುರ
ಕೊಪ್ಪಳ: ಟಾಟಾ ಏಸ್ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಕೊಪ್ಪಳ ತಾಲೂಕಿನ ಬಂಡಿ ಹರ್ಲಾಪುರ ಗ್ರಾಮದ ಸಮೀಪ ನಡೆದಿದೆ.
ಮೃತರನ್ನು ಬಂಡಿ ಹರ್ಲಾಪುರ ಗ್ರಾಮದ ನಿವಾಸಿಗಳಾದ ಹುಲ್ಲೇಶ್ ವಾಲಿಕಾರ ಹಾಗೂ ಮಾರುತಿ ಎಂದು ಗುರುತಿಸಲಾಗಿದೆ. ಇಬ್ಬರೂ ಮುಕುಂದ್ ಸ್ಟೀಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಮಂಗಳವಾರ ರಾತ್ರಿ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಬೈಕ್ಗೆ ಟಾಟಾ ಏಸ್ ವಾಹನ ಡಿಕ್ಕಿಯಾದ ಪರಿಣಾಮ ಅಪಘಾತದ ತೀವ್ರತೆಗೆ ಇಬ್ಬರು ಯುವಕರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಮುನಿರಾಬಾದ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ಈ ಸಂಬಂಧ ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.
💔 ಕೆಲಸಕ್ಕೆ ತೆರಳುತ್ತಿದ್ದ ಇಬ್ಬರು ಯುವಕರು ದುರಂತದಲ್ಲಿ ಜೀವ ಕಳೆದುಕೊಂಡಿರುವುದು ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ತೀವ್ರ ದುಃಖಕ್ಕೆ ಕಾರಣವಾಗಿದೆ.
⚠️ ರಸ್ತೆ ಸುರಕ್ಷತೆ ಪ್ರತಿಯೊಬ್ಬರ ಜವಾಬ್ದಾರಿ. ವಾಹನ ಚಲಾಯಿಸುವಾಗ ವೇಗದ ನಿಯಂತ್ರಣ, ಸಂಚಾರ ನಿಯಮಗಳ ಪಾಲನೆ ಹಾಗೂ ಎಚ್ಚರಿಕೆ ಅತ್ಯಗತ್ಯ.
🌐 ಕೊಪ್ಪಳ ಜಿಲ್ಲೆಯ ತಾಜಾ ಸುದ್ದಿಗಳಿಗಾಗಿ
📲 ನಿಮ್ಮ ಊರಿನ ಸುದ್ದಿ ನಿಮ್ಮ ಬೆರಳ ತುದಿಯಲ್ಲಿ!
📰 ಸ್ಥಳೀಯ ಸುದ್ದಿ | 🚨 ಬ್ರೇಕಿಂಗ್ ಅಪ್ಡೇಟ್ | 📍 ಜಿಲ್ಲೆ-ತಾಲೂಕು ಸುದ್ದಿಗಳು
👉 ಇನ್ನಷ್ಟು ಸುದ್ದಿಗಳಿಗಾಗಿ ಈಗಲೇ ಭೇಟಿ ನೀಡಿ:
🌐 www.karunaadutimes.com
🔔 Karunaadu Times — ನಿಮ್ಮ ಊರಿನ ಸುದ್ದಿಗೆ ನಿಮ್ಮದೇ ವೇದಿಕೆ.
ವರದಿ: ನವೀನ್ ಕುಮಾರ್
🏷️ Tags:#Koppal #KoppalNews #BandiHarlapur #Munirabad #RoadAccident #BikeAccident #TataAce #AccidentNews #KarnatakaNews #KoppalDistrict #LocalNews #BreakingNews #RoadSafety #ಕರ್ನಾಟಕಸುದ್ದಿ #ಕೊಪ್ಪಳ #ಕೊಪ್ಪಳಸುದ್ದಿ #ಬಂಡಿಹರ್ಲಾಪುರ #ಮುನಿರಾಬಾದ್ #ರಸ್ತೆಅಪಘಾತ #ಅಪಘಾತಸುದ್ದಿ #ಸ್ಥಳೀಯಸುದ್ದಿ