ಚಾಮರಾಜನಗರ: ನಗರದ ವಿವಿಧ ಹೊಟೇಲ್, ರೆಸ್ಟೋರೆಂಟ್ಗಳು ಹಾಗೂ ಆಹಾರ ತಯಾರಿಕಾ ಘಟಕಗಳ ಮೇಲೆ ಜಿಲ್ಲಾಧಿಕಾರಿ ಶ್ರೀರೂಪಾ ನೇತೃತ್ವದಲ್ಲಿ ಅಧಿಕಾರಿಗಳು ದಿಢೀರ್ ತಪಾಸಣೆ ನಡೆಸಿದ್ದು, ಆಹಾರದ ಗುಣಮಟ್ಟ ಮತ್ತು ಸ್ವಚ್ಛತೆ ವಿಚಾರದಲ್ಲಿ ಹಲವು ಲೋಪಗಳು ಪತ್ತೆಯಾಗಿವೆ. ⚠️
ತಪಾಸಣೆ ವೇಳೆ ಉಡುಪಿ ಗ್ರ್ಯಾಂಡ್ ಹೊಟೇಲ್ನಲ್ಲಿ ಆಹಾರ ಪದಾರ್ಥಗಳಿಗೆ ಕೃತಕ ಬಣ್ಣ ಮಿಶ್ರಣ ಮಾಡಿರುವುದು, ಅಡುಗೆ ಮನೆಯ ಸ್ವಚ್ಛತೆಯಲ್ಲಿ ಕೊರತೆ ಹಾಗೂ ಅವಧಿ ಮೀರಿದ ಆಹಾರ ಪದಾರ್ಥಗಳ ಬಳಕೆ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ ಮಕಾವ್ ಹೊಟೇಲ್ನಲ್ಲೂ ತಾಜಾ ಇಲ್ಲದ ಮಾಂಸ ಹಾಗೂ ಮಶ್ರೂಮ್ಗಳನ್ನು ಬಳಸುತ್ತಿರುವುದು ತಪಾಸಣೆಯಲ್ಲಿ ಪತ್ತೆಯಾಗಿದೆ.
ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ಉಡುಪಿ ಗ್ರ್ಯಾಂಡ್ ಹಾಗೂ ಮಕಾವ್ ಹೊಟೇಲ್ಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಜಿಲ್ಲಾಧಿಕಾರಿ ಶ್ರೀರೂಪಾ ಆದೇಶಿಸಿದ್ದಾರೆ. 🚨
ಇಷ್ಟಕ್ಕೇ ಕಾರ್ಯಾಚರಣೆ ಸೀಮಿತವಾಗಿಲ್ಲ. ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಕೇನ್ಸ್ ಹಾಗೂ ಕಲರ್ ಟೋನ್ ಉದ್ಯಮ ಸಂಸ್ಥೆಗಳಿಗೂ ಅಧಿಕಾರಿಗಳು ಭೇಟಿ ನೀಡಿ, ಆಹಾರ ತಯಾರಿಕೆಯ ವಿಧಾನ, ಗುಣಮಟ್ಟ ಹಾಗೂ ಸ್ವಚ್ಛತಾ ಕ್ರಮಗಳ ಕುರಿತು ಪರಿಶೀಲನೆ ನಡೆಸಿದ್ದಾರೆ.
ನಗರದ ರಸ್ತೆ ಬದಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೇಕರಿಗಳಿಗೂ ಜಿಲ್ಲಾಧಿಕಾರಿ ಭೇಟಿ ನೀಡಿ ಆಹಾರ ಪದಾರ್ಥಗಳ ಗುಣಮಟ್ಟ, ಸಂಗ್ರಹಣಾ ವಿಧಾನ, ಸ್ವಚ್ಛತೆ ಹಾಗೂ ಅವಧಿ ಮೀರಿದ ಉತ್ಪನ್ನಗಳ ಬಳಕೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಿದ್ದಾರೆ.
ಜನರ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರದಲ್ಲಿ ನಿರ್ಲಕ್ಷ್ಯಕ್ಕೆ ಅವಕಾಶವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಜಿಲ್ಲಾಡಳಿತದ ಈ ದಿಢೀರ್ ಕಾರ್ಯಾಚರಣೆ ನೀಡಿದೆ. 🍽️🔍
ಅವಧಿ ಮೀರಿದ ಆಹಾರ, ಕೃತಕ ಬಣ್ಣಗಳ ಬಳಕೆ ಹಾಗೂ ಆಹಾರ ತಯಾರಿಕಾ ಸ್ಥಳಗಳಲ್ಲಿನ ಸ್ವಚ್ಛತೆಯ ಕೊರತೆಯ ವಿರುದ್ಧ ಮುಂದಿನ ದಿನಗಳಲ್ಲೂ ತಪಾಸಣೆ ಮುಂದುವರಿಯುವ ಸಾಧ್ಯತೆ ಇದೆ.
ವರದಿ: ನವೀನ್ ಕುಮಾರ್
🌐 ಇಂತಹ ಸ್ಥಳೀಯ ಸುದ್ದಿಗಳಿಗಾಗಿ ಭೇಟಿ ನೀಡಿ:
www.karunaadutimes.com
Tpags:#ಚಾಮರಾಜನಗರ #Chamarajanagar #ChamarajanagarNews #ಕರ್ನಾಟಕಸುದ್ದಿ #ಆಹಾರಸುರಕ್ಷತೆ #FoodSafety #HotelInspection #ExpiredFood #ಆಹಾರಗುಣಮಟ್ಟ #ಜಿಲ್ಲಾಡಳಿತ #BreakingNews #KarnatakaNews #LocalNews #KarunaaduTimeLps