ಧಾರವಾಡ: ಮಹಾರಾಷ್ಟ್ರದ ಸೊಲ್ಲಾಪುರದಿಂದ ಧಾರವಾಡಕ್ಕೆ ಆಗಮಿಸಿದ್ದ ರೈಲಿನ ಮಹಿಳಾ ಬೋಗಿಯಲ್ಲಿ ಅರೆಬೆತ್ತಲೆ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದ್ದು, ರೈಲು ಪ್ರಯಾಣದ ವೇಳೆ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಬಳಿಕ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. 🚨
ಮಾಹಿತಿಯ ಪ್ರಕಾರ, ಸೊಲ್ಲಾಪುರದಿಂದ ಕಳೆದ ರಾತ್ರಿ ಹೊರಟಿದ್ದ ರೈಲು ಇಂದು ಬೆಳಗ್ಗೆ ಧಾರವಾಡಕ್ಕೆ ತಲುಪಿದೆ. ರೈಲು ನಿಲ್ದಾಣದಲ್ಲಿ ಬೋಗಿಗಳನ್ನು ಸ್ವಚ್ಛಗೊಳಿಸಲು ಬಂದ ಸಿಬ್ಬಂದಿಗೆ ರೈಲಿನ ಕೊನೆಯ ಭಾಗದಲ್ಲಿದ್ದ ಮಹಿಳಾ ಬೋಗಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.
ತಕ್ಷಣವೇ ಸಿಬ್ಬಂದಿ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಧಾರವಾಡದ ವಿದ್ಯಾಗಿರಿ ಠಾಣೆ ಪೊಲೀಸರು ಸಹ ಸ್ಥಳಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ. 👮♂️
ಪ್ರಾಥಮಿಕವಾಗಿ, ರೈಲು ರಾತ್ರಿ ಸಂಚರಿಸುತ್ತಿದ್ದ ಸಂದರ್ಭದಲ್ಲೇ ಈ ದುರ್ಘಟನೆ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಮಹಿಳೆಯ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸುವ ಸಾಧ್ಯತೆ ಇದೆ.
ಮಹಿಳೆಯ ಸಾವಿಗೆ ನಿಖರ ಕಾರಣವೇನು? ಇದು ಅತ್ಯಾಚಾರ ಮತ್ತು ಕೊಲೆ ಪ್ರಕರಣವೇ ಅಥವಾ ಬೇರೆ ಯಾವುದೇ ಕಾರಣವಿದೆಯೇ ಎಂಬುದು ಪೊಲೀಸ್ ತನಿಖೆ ಮತ್ತು ಮರಣೋತ್ತರ ಪರೀಕ್ಷೆಯ ವರದಿ ಬಳಿಕವೇ ಸ್ಪಷ್ಟವಾಗಬೇಕಿದೆ.
ಸದ್ಯ ರೈಲ್ವೆ ಪೊಲೀಸರು ಹಾಗೂ ಸ್ಥಳೀಯ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ. 🔍
👉 ರಾಜ್ಯ, ದೇಶ ಹಾಗೂ ಸ್ಥಳೀಯ ಸುದ್ದಿಗಳ ಕ್ಷಣಕ್ಷಣದ ಅಪ್ಡೇಟ್ಗಳಿಗಾಗಿ ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ
🌐 www.karunaadutimes.com 👈
🔔 ಇನ್ನಷ್ಟು ಸುದ್ದಿಗಳಿಗಾಗಿ ವೆಬ್ಸೈಟ್ ವಿಸಿಟ್ ಮಾಡಿ | Follow & Share
🏷️ Tags:#Dharwad #DharwadNews #RailwayNews #TrainNews #CrimeNews #KarnatakaNews #WomanDeath #PoliceInvestigation #RailwayPolice #VidyagiriPolice #BreakingNews #LatestNews #KarnatakaBreakingNews #CrimeInvestigation #Solapur #DharwadRailwayStation #KarunaaduTimes #KarunaaduTimesNews #KannadaNews #NewsUpdate #ViralNews