ಬೆಂಗಳೂರು: ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾಗಿದ್ದ ಯುವತಿಗೆ ಎಂಗೇಜ್ಮೆಂಟ್ ಆಗಿದೆ ಎಂಬ ವಿಚಾರ ತಿಳಿದು ಮನನೊಂದ 15 ವರ್ಷದ ಅಪ್ರಾಪ್ತ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಬೇಗೂರು ಸಮೀಪದ ಅಕ್ಷಯ ನಗರದಲ್ಲಿ ನಡೆದಿದೆ. 🚨
ಮೂರು ತಿಂಗಳ ಹಿಂದೆ ಇನ್ಸ್ಟಾಗ್ರಾಮ್ ಮೂಲಕ ಯುವತಿಯ ಪರಿಚಯವಾಗಿದ್ದ ಬಾಲಕ, ಬಳಿಕ ಆಕೆಯೊಂದಿಗೆ ಫೋನ್ನಲ್ಲಿ ನಿರಂತರವಾಗಿ ಮಾತನಾಡುತ್ತಿದ್ದ ಎನ್ನಲಾಗಿದೆ. ಈ ನಡುವೆ ಯುವತಿ ನಿನ್ನೆ ಸಂಜೆ ಬಾಲಕನಿಗೆ ಕರೆ ಮಾಡಿ, ತನ್ನ ಎಂಗೇಜ್ಮೆಂಟ್ ಆಗಿದೆ, ಇನ್ನು ಮುಂದೆ ಕರೆ ಮಾಡಬೇಡ ಎಂದು ತಿಳಿಸಿದ್ದಾಳೆ.
ಇದರಿಂದ ತೀವ್ರವಾಗಿ ಮನನೊಂದ ಬಾಲಕ, ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಬಳಿಕ ಮನೆಯ ಆರನೇ ಮಹಡಿಗೆ ತೆರಳಿ, ಅಲ್ಲಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಬೇಗೂರು ಪೊಲೀಸರು, ಬಾಲಕನ ಮನವೊಲಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ನಿರಂತರವಾಗಿ ಮಾತುಕತೆ ನಡೆಸಿ, ಆತನನ್ನು ಸುರಕ್ಷಿತವಾಗಿ ಕೆಳಗೆ ಇಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಳಿಕ ಬಾಲಕನಿಗೆ ಬುದ್ಧಿವಾದ ಹೇಳಿ, ಕುಟುಂಬದವರೊಂದಿಗೆ ಕಳುಹಿಸಿದ್ದಾರೆ.
ಕಿರಿಯ ವಯಸ್ಸಿನಲ್ಲೇ ಸಾಮಾಜಿಕ ಜಾಲತಾಣದ ಪರಿಚಯ ಭಾವನಾತ್ಮಕ ಒತ್ತಡಕ್ಕೆ ಕಾರಣವಾಗಿರುವ ಈ ಘಟನೆ, ಮಕ್ಕಳ ಆನ್ಲೈನ್ ಚಟುವಟಿಕೆಗಳ ಬಗ್ಗೆ ಪೋಷಕರು ಹೆಚ್ಚಿನ ಗಮನಹರಿಸುವ ಅಗತ್ಯವನ್ನೂ ಎತ್ತಿ ತೋರಿಸಿದೆ. 📱⚠️
📍 ಸ್ಥಳ: ಅಕ್ಷಯ ನಗರ, ಬೇಗೂರು, ಬೆಂಗಳೂರು
📰 ಹೆಚ್ಚಿನ ಸುದ್ದಿಗಳಿಗಾಗಿ: 🌐 www.karunaadutimes.com
🔖 Tags:#Bengaluru #Begur #AkshayaNagar #BangaloreNews #KarnatakaNews #InstagramLove #Instagram #MinorBoy #SuicideAttempt #BegurPolice #CrimeNews #BengaluruCrime #SocialMedia #KannadaNews #KarunaduTimes #KarunaduTimesNews #ಬೆಂಗಳೂರು #ಬೇಗೂರು #ಅಕ್ಷಯನಗರ #ಬೆಂಗಳೂರುಸುದ್ದಿ #ಕರ್ನಾಟಕಸುದ್ದಿ #ಇನ್ಸ್ಟಾಗ್ರಾಮ್ #ಆತ್ಮಹತ್ಯೆಯತ್ನ #ಬೇಗೂರುಪೊಲೀಸ್ #ಅಪರಾಧಸುದ್ದಿ