ಡೊಮಿನಿಕನ್ ಗಣರಾಜ್ಯ:
ಡೊಮಿನಿಕನ್ ಗಣರಾಜ್ಯದ ಲಾ ರೊಮಾನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖಾಸಗಿ ಜೆಟ್ ವಿಮಾನವೊಂದು ತುರ್ತು ಲ್ಯಾಂಡಿಂಗ್ ವೇಳೆ ಪತನಗೊಂಡು ಬೆಂಕಿಗಾಹುತಿಯಾದ ಘಟನೆ ಆತಂಕ ಮೂಡಿಸಿದೆ. ಈ ದುರ್ಘಟನೆಯಲ್ಲಿ ವಿಮಾನದಲ್ಲಿದ್ದ ಪೈಲಟ್ ಹಾಗೂ ಸಹ-ಪೈಲಟ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಮೆರಿಕದ ಟೆಕ್ಸಾಸ್ ರಾಜ್ಯದ ಆಸ್ಟಿನ್ ನಗರಕ್ಕೆ ತೆರಳಬೇಕಿದ್ದ ಗಲ್ಫ್ಸ್ಟ್ರೀಮ್ G200 ಮಾದರಿಯ ಖಾಸಗಿ ಜೆಟ್ಗೆ ಹಾರಾಟದ ವೇಳೆ ತಾಂತ್ರಿಕ ತೊಂದರೆ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಇದರಿಂದ ಪೈಲಟ್ ವಿಮಾನವನ್ನು ತುರ್ತಾಗಿ ಲ್ಯಾಂಡ್ ಮಾಡಲು ನಿರ್ಧರಿಸಿದ್ದರು ಎನ್ನಲಾಗಿದೆ.
ಆದರೆ ರನ್ವೇ ತಲುಪುವ ಹೊತ್ತಿಗೇ ವಿಮಾನದ ಹಿಂಭಾಗದಲ್ಲಿ ಏಕಾಏಕಿ ಸ್ಫೋಟ ಸಂಭವಿಸಿದ್ದು, ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿದೆ. ಬೆಂಕಿಯ ಕೆನ್ನಾಲಿಗೆಯಲ್ಲಿ ಸಿಲುಕಿದ ಇಬ್ಬರು ಸಿಬ್ಬಂದಿಯನ್ನು ರಕ್ಷಿಸಲು ಸಾಧ್ಯವಾಗದೆ ಅವರು ಸಾವನ್ನಪ್ಪಿದ್ದಾರೆ.
ಘಟನೆಯ ದೃಶ್ಯಗಳನ್ನು ವಿಮಾನ ನಿಲ್ದಾಣದ ಸುತ್ತಮುತ್ತ ಇದ್ದವರು ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿದ್ದ ವಿಮಾನದ ದೃಶ್ಯಗಳು ನೋಡುಗರನ್ನು ಬೆಚ್ಚಿಬೀಳಿಸುವಂತಿವೆ.
ವಿಮಾನ ಏಕೆ ತುರ್ತು ಲ್ಯಾಂಡಿಂಗ್ಗೆ ಮುಂದಾಯಿತು? ಸ್ಫೋಟಕ್ಕೆ ಕಾರಣವಾದ ತಾಂತ್ರಿಕ ದೋಷ ಏನು? ಎಂಬ ಕುರಿತು ವಿಮಾನಯಾನ ಅಧಿಕಾರಿಗಳು ಹಾಗೂ ತನಿಖಾ ತಂಡಗಳು ಪರಿಶೀಲನೆ ಆರಂಭಿಸಿವೆ. ದುರಂತದ ನಿಖರ ಕಾರಣ ತನಿಖೆಯ ಬಳಿಕವೇ ಬಹಿರಂಗವಾಗಲಿದೆ.
#Tags
#PlaneCrash #DominicanRepublic #LaRomanaAirport #PrivateJetCrash #GulfstreamG200 #AviationNews #BreakingNews #TexasFlight #EmergencyLanding #AircraftAccident #WorldNews #KarunaadaTimes #ViralVideo #FlightCrash #InternationalNews